ಜ್ಯೋತಿ ಬಸು (ಬಂಗಾಳಿ: জ্যোতি বসু, ೮ ಜುಲೈ ೧೯೧೪ – ೧೭ ಜನೆವರಿ ೨೦೧೦) ಮಾರ್ಕ್ಸ್‌ವಾದಿ ಕಮ್ಯೂನಿಸ್ಟ್ ಪಕ್ಷಕ್ಕೆ ಸೇರಿದ್ದ ಪಶ್ಚಿಮ ಬಂಗಾಳದ ಒಬ್ಬ ರಾಜಕಾರಣಿಯಾಗಿದ್ದರು. ಅವರು ೧೯೭೭ರಿಂದ ೨೦೦೦ರ ವರೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿ ಭಾರತದ ಯಾವುದೇ ರಾಜ್ಯದಲ್ಲಿ ಅತಿ ದೀರ್ಘಾವಧಿಯವರೆಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಗೌರವಕ್ಕೆ ಪಾತ್ರರಾಗಿದ್ದರು. ಅವರು, ಪಕ್ಷದ ಸ್ಥಾಪನೆಯಾದ ೧೯೬೪ರಿಂದ ೨೦೦೮ರ ವರೆಗೆ, ಸಿಪಿಐ(ಎಂ) ಪಾಲಿಟ್‌ಬ್ಯೂರೋದ ಸದಸ್ಯರಾಗಿದ್ದರು.